ಚೆಲ್ಲಕೇತನ
9-10ನೆಯ ಶತಮಾನಗಳಲ್ಲಿ ಬನವಾಸಿ ಮಂಡಲದ ಅಧಿಕಾರಿಗಳಾಗಿದ್ದವರ ಒಂದು ಪ್ರಮುಖ ಮನೆತನ. ಎರಕೋರಿ ಎಂಬುವನು ಇದರ ಮೊದಲಿಗ. ಕೊಳನೂರಾಧೀಶ್ವರನೆನಿಸಿದ ಧೋರ ಈತನ ಮಗ. ಧೋರನ ಮಗ ಬಂಕೆಯ, ಈತನ ತಾಯಿ ವಿಜಯಾಂಕಾ, ಬಂಕೆಯನನ್ನು ಶಾಸನಗಳಲ್ಲಿ ಬಂಕೇಶ, ಬಂಕೆಯರಸ ಎಂದೂ ಕರೆಯಲಾಗಿದೆ. ಈತ ರಾಷ್ಟ್ರಕೂಟ 1ನೆಯ ಅಮೋಘವರ್ಷನ ಮಾಂಡಲಿಕನಾಗಿ ಬನವಾಸಿನಾಡನ್ನು ಆಳುತ್ತಿದ್ದ. ಕುಂದಟ್ಟೆ ಮತ್ತು ಲೋಕಾದಿತ್ಯ (ಲೋಕಟೆ) ಇವನ ಮಕ್ಕಳು. ಹಿರಿಯ ಮಗ ನಿಡಗುಂದಗೆ-12 ಎಂಬ ಸಣ್ಣ ಭಾಗದ ಅಧಿಕಾರಿಯಾಗಿದ್ದ. ಲೋಕಾದಿತ್ಯ ಸು. 895ರಿಂದ ಒಂದು ದಶಕಕ್ಕೂ ಹೆಚ್ಚು ಕಾಲ ಬನವಾಸಿ ಪ್ರಾಂತ್ಯಾಧಿಕಾರಿಯಾಗಿದ್ದ. ಇವನ ಮಗ ಕಲಿವಿಟ್ಟ ಇವನ ಅಧೀನದಲ್ಲಿ ಪುನ್ನವಂತಿ (ಹೊನ್ನತಿ)-12ರ ಅಧಿಕಾರಿಯಾಗಿದ್ದ. 916ರ ಹಾಗೂ 928ರ ಶಾಸನಗಳಲ್ಲಿ ಬಂಕೆಯನೆಂಬಾತ ಬನವಾಸಿ ಪ್ರಾಂತ್ಯಾಧಿಕಾರಿಯಾಗಿದ್ದನೆಂದು ಹೇಳಿದೆ. ಈತ ಲೋಕಟೆಯ ಮಗನಾಗಿರಬೇಕು. 914ರ ಶಾಸನವೊಂದರಲ್ಲಿ ಧೋರನೆಂಬಾತ ಈ ಪ್ರಾಂತ್ಯವನ್ನು ಆಳುತ್ತಿದ್ದನೆಂದು ಹೇಳಿದೆ. ಆದ್ದರಿಂದ ಈತ ಇಮ್ಮಡಿ ಬಂಕೆಯನ ಸೋದರನಾಗಿರಬಹುದು. 

ಚಿತ್ರ-1-ಚೆಲ್ಲಕೇತನ-ವಂಶಾವಳಿ

ಕಲಿವಿಟ್ಟನೆಂಬುವನು ಲೋಕಟೆಯ ಮಗನೆಂದು ಹೇಳಿರುವ ಕಾರಣದಿಂದಲೂ ಆತನ ಶಾಸನಗಳು ಧೋರನ ಶಾಸನಕ್ಕೂ ಮೊದಲಿನವಾದ್ದರಿಂದಲೂ ಕಲಿವಿಟ್ಟನಿಗೆ ಧೋರ ಕಿರಿಯ ಸೋದರನೆಂದು 
ಎ¾ಕೋರಿ
ಧೋರ 1
ಬಂಕೆಯ 1 (800)
ಕುಂದಟ್ಟೆ ಲೋಕಟೆ (ಲೋಕಾದಿತ್ಯ (896-905)
(860)
ಕಲಿವಿಟ್ಟ 1 ಧೋರ 2 ಬಂಕೆಯ 2
(913-14) (915-16) (916-928)
ಕಲಿವಿಟ್ಟ 2
(928-945)
ಊಹಿಸಬಹುದು. ಕಲಿವಿಟ್ಟ 929ರಲ್ಲಿ ಬೆಳ್ವೊಲ-200 ಪ್ರಾಂತ್ಯವನ್ನು ಆಳುತ್ತಿದ್ದ. ಅದೇ ಹೆಸರಿನ ಒಬ್ಬಾತ ಬನವಾಸಿಯನ್ನು  945-45ರಲ್ಲಿ ಆಳುತ್ತಿದ್ದನೆಂದೂ ಶಾಸನಗಳಿಂದ ತಿಳಿದಿದೆ. 928ರವರೆಗೆ ಬಂಕೆಯ ಬನವಾಸಿ ನಾಡಧಿಕಾರಿಯಾಗಿದ್ದ ಕಾರಣ. ಅವನ ಅನಂತರ ಅವನ ಮಗನಾದ ಈ ಕಲಿವಿಟ್ಟ ಮೊದಲ ಬೆಳ್ವೆಲ ಹಾಗೂ ಅನಂತರ ಬನವಾಸಿ ಪ್ರಾಂತ್ಯಗಳ ಅಧಿಕಾರಿಯಾಗಿದ್ದನೆಂದು ಊಹಿಸಬೇಕಾಗಿದೆ. ಈ ವಿವರಗಳನ್ನೊಟ್ಟುಗೂಡಿಸಿ ಚೆಲ್ಲಕೇತನ ಮನೆತನದ ವಂಶಾವಳಿಯನ್ನು ಹೇಗೆ ರೂಪಿಸಬಹುದು ಎಂಬುದನ್ನು ಹಿಂದಿನ ಪುಟದಲ್ಲಿ ತೋರಿಸಿದೆ.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ